ಸೂಪರ್ ನೇಪಿಯರ್ ಹುಲ್ಲು ವೈಶಿಷ್ಟ್ಯಗಳು
- ನೇಪಿಯರ್ ದಂಟು ಹುಲ್ಲುಗಳನ್ನು, 1 ರೂಪಾಯಿಯ ಮಾರಾಟದಲ್ಲಿ,ಅತಿ ಕಡಿಮೆ ಸಾರಿಗೆ ವೆಚ್ಚದಲ್ಲಿ ಕಳುಹಿಸಿಕೊಡ್ತಿವಿ
- ಇದರಲ್ಲಿ ಯಾವುದೇ ಗುಪ್ತ ವೆಚ್ಚಗಳಿಲ್ಲ. ದಂಟು ಹುಲ್ಲುಗಳನ್ನು ಕತ್ತರಿಸುವ ಜನರ ಕೂಲಿ, ಗೋಣಿ ಚೀಲದ ವೆಚ್ಚ, ಲಾರಿಯನ್ನು ಆಫೀಸ್ ಗೆ ತಂದು ನೊಂದಾಯಿಸುವ
- ವೆಚ್ಚ,ಸೇರಿದಂತೆ ಎಲ್ಲಾ ಖರ್ಚುಗಳನ್ನ ಒಂದು ರೂಪಾಯಿಯಲ್ಲೆ ಮುಗಿಸಿ, ನೋಂದಣಿ ಮಾಡಿದ ತಕ್ಷಣವೇ ಕಳುಹಿಸುತ್ತೇವೆ.
- ಇನ್ನೂ ಕೆಲವು ವಾರಗಳ ನಂತರ,ನಾಟಿ ಮಾಡಲಿರುವ ಸ್ನೇಹಿತರು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಬಹುದು.
- ನಾವು ಸಂಪೂರ್ಣ ಮಾರ್ಗದರ್ಶನವನ್ನು ನೀಡುತ್ತೇವೆ.ಅಂದ್ರೆ, ಸೂಪರ್ ನೇಪಿಯರ್ ದಂಟು ಹುಲ್ಲುಗಳನ್ನು ಹೇಗೆ ಕೃಷಿ ಮಾಡುವುದು. ಹೇಗೆ ಕೊಯ್ಲು ಮಾಡುವುದು, ಮೇವಾಗಿ ಬಳಸುವತನಕ. ನಾವು ಮಾರ್ಗದರ್ಶನ ಮಾಡುತ್ತೇವೆ.
- ಈ ಹುಲ್ಲಿನ ವೈಶಿಷ್ಟ್ಯಗಳು:
- ಹಸುಗಳ ಹಾಲು ಕರೆಯುವ ಸಾಮರ್ಥ್ಯ20% ನಿಂದ 30% ಹೆಚ್ಚಾಗುತ್ತದೆ. ಅಂದ್ರೆ 10 ಲೀಟರ್ ಹಾಲು ಕರೆಯುವ ಹಸು , 12 ರಿಂದ 13 ಲೀಟರ್ಗಳಷ್ಟು ಹೆಚ್ಚು ಹಾಲು ಕರೆಯುತ್ತದೆ. ಇದಕ್ಕೆ ಕಾರಣ,ಭಾರತದಲ್ಲಿ ಸಿಗುವ ನೇಪಿಯರ್ ಹುಲ್ಲುಗಳಲ್ಲಿಯೆ ಅಧಿಕ
ಇಳುವರಿಯೊಂದಿಗೆ (180ರಿಂದ 200ಟನ್ ಹಸುವಿನ ಮೇವು ವರ್ಷಕ್ಕೆ ಒಂದು ಎಕರೆಯಲ್ಲೇ ಸಿಗುತ್ತದೆ ) ಹೆಚ್ಚಿನ ಪೋಷಕಾಂಶಗಳು ಅಂದ್ರೆ , 14%ರಿಂದ 18% ನಷ್ಟು ಹೆಚ್ಚಿನ ಪ್ರೋಟೀನ್ ಅಂಶಗಳು ಇದರಲಷ್ಟೆ ಸಿಗುತ್ತದೆ .
- ಇದರಲ್ಲಿ ಗಮನಿಸಬೇಕಾದದ್ದು, ಹೆಚ್ಚುವರಿ ವೆಚ್ಚವಿಲ್ಲದೆ ಈ ಅನುಕೂಲಗಳು ಸಿಗುತ್ತವೆ
- ಎಕರೆಗೆ 100 ಟನ್ ನಂತೆ ಎರಡು ಎಕರೆಗಳಲ್ಲಿ 200 ಟನ್ ಇತರೆ ಹುಲ್ಲುಗಳು ಬೆಳೆಯುತ್ತವೆ ಆದರೆ ಸೂಪರ್ ನೇಪಿಯರ್,ಒಂದೇ ಎಕರೆಯಲ್ಲಿ 200 ಟನ್ ಇಳುವರಿ ಕೊಡುತ್ತದೆ. ಆದ್ದರಿಂದ ನಮಗೆ ಒಂದು ಎಕರೆಯ ಎಲ್ಲಾ ಖರ್ಚುಗಳು ಉಳಿತಾಯವಾಗುತ್ತದೆ .ಇದರಿಂದ ನಮಗೆ ಒಂದು ವರ್ಷದಲ್ಲಿ ಅತಿ ಹೆಚ್ಚಿನ ಹಣ ಉಳಿತಾಯವಾಗುತ್ತದೆ.
- ಜಾನುವಾರುಗಳು ಯಾವುದೇ ಪೋಷಕಾಂಷದ ಕೊರತೆ ಇಲ್ಲದೆ ಅತಿ ಬೇಗ ಚೆನ್ನಾಗಿ ಬೆಳೆಯುತ್ತವೆ ಮತ್ತು ವೈದ್ಯಕೀಯ ವೆಚ್ಚಗಳು ಕಡಿಮೆಯಾಗುತ್ತದೆ.
- ಜಾನುವಾರುಗಳಿಗೆ ನೀಡುವ ಮಿಶ್ರ ಮೇವಿನ ಖರ್ಚು ಕಡಿಮೆಯಾಗುವುದರಿಂದ ಉಳಿದ ಖರ್ಚುಗಳು ಕಡಿಮೆಯಾಗಿ,ಜಾನುವಾರುಗಳಿಗೆ ನೈಸರ್ಗಿಕವಾದ, ಕಡಿಮೆ
,ಖರ್ಚಿನಲ್ಲಿ ಪೋಷಕಾಂಶಯುಕ್ತ, ಪರಿಶುದ್ಧವಾದ ಮೇವನ್ನು ನಮ್ಮ ನೆಲದಲ್ಲಿಯೆ ಕೃಷಿ ಮಾಡಿಕೊಡಬಹುದು
.
- ಇದರಲ್ಲಿ ಹೆಚ್ಚಿನ ಸಿಹಿರುಚಿ ಇರುವ ಕಾರಣ, ಜಾನುವಾರುಗಳು ತಿಂದ ನಂತರ ಸುಲಭವಾಗಿ ಜೀರ್ಣವಾಗುತ್ತದೆ. ತ್ಯಾಜ್ಯವೂ ತುಂಬಾ ಕಡಿಮೆ
- ಶೈಲೆಜ್ ರೀತಿಯಲ್ಲಿ ಹದ ಮಾಡಲು ಸೂಕ್ತವಾದ ಹುಲ್ಲು.
ಈ ರೀತಿಯ ಹಲವಾರು ವಿಶೇಷತೆಗಳಿರುವ ಈ ಹುಲ್ಲನ್ನು ನಮ್ಮ ರೈತರು ಅತಿ ವೇಗವಾಗಿ ನಾಟಿ ಮಾಡಿ ಅಧಿಕ ಲಾಭ ಮಾಡಿಕೊಳ್ಳಬಹುದು .
ಪ್ರಸ್ತುತ ಪಶು ಸಾಕಾಣಿಕೆ ಉದ್ಯಮ ಹೆಚ್ಚು ಲಾಭದಾಯಕವಲ್ಲದ ಉದ್ಯಮವಾಗಿದೆ. ಇದನ್ನು ಬದಲಾಯಿಸಲು ಒಂದು ಚಿಕ್ಕ ಪ್ರಯತ್ನವೇ ಈ ಹುಲ್ಲು ,ಆದ್ದರಿಂದ ಈ ನೇಪಿಯರ್ ಮೇವಿನ ಹುಲ್ಲಿಗೆ ನೀವು ಬದಲಾಗಿ,ಅತ್ಯುತ್ತಮ ಗುಣಮಟ್ಟದ ಜಾನುವಾರುಗಳನ್ನು ಬೆಳಸಿ, ನೀವು ಜೀವನದಲ್ಲಿ ಅಭಿವೃದ್ಧಿಹೊಂದಿ
ಸೂಚನೆ : ಎಕರೆಗೆ ಸುಮಾರು 10,000 ರಿಂದ 12000 ನೇಪಿಯರ್ ಹುಲ್ಲಿನ ದಂಟು ಬೇಕಾಗುತ್ತದೆ
ಒಂದು ಎಕರೆಯಲ್ಲಿ ಜಾನುವಾರುಗಳ ಇತರೆ ಮೇವಿನ ಜೊತೆ ಸೂಪರ್-ನೇಪಿಯರ್
ವ್ಯವಸಾಯ ಮಾಡಿ 15 ಹಸುಗಳು ಮತ್ತು 40 ಕುರಿಗಳನ್ನು ಖಂಡಿತವಾಗಿ ಪೋಷಿಸಬಹುದು
ಕೃಷಿ ವಿಧಾನ